ನಮಸ್ಕಾರ,
ಇತ್ತೀಚೆಗೆ ನಾನು ಓದಿದ ಪುಸ್ತಕಗಳ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿ ನೀಡುತ್ತೇನೆ;
೧. ಮುಸ್ಸಂಜೆಯ ಕಥಾ ಪ್ರಸಂಗ - ಲಂಕೇಶ್
೨. ವಿಷಪ್ರಾಷಣ - ತ.ರಾ.ಸು
೩. ಮಲೆನಾಡಿನ ಚಿತ್ರಗಳು - ಕು. ವೆಂ. ಪು
ಈ ೩ ಪುಸ್ತಕಗಳ ವಿಶೇಷ ಅಂದ್ರೆ ಈ ೩ ಪುಸ್ತಕಗಳಲ್ಲು ಶಿವಮೂಗ್ಗದ ಮಲೆನಾಡಿನ ಸುತ್ತ ಮುತ್ತ ಪ್ರದೇಶಗಳ ಜನ ಜೀವನಗಳ ಬಗ್ಗೆ ಕಥೆ ಹೆಣೆಯಲಾಗಿದೆ; ನಾನು ಶಿವಮೊಗ್ಗದವನೆ, ಆದರೆ ನನ್ನ ಈ ೩ ಪುಸ್ತಕಗಳ ಆಯ್ಕೆ ಮಾತ್ರ ಕಾಕತಾಳಿಯ!!
೧. ಮುಸ್ಸಂಜೆಯ ಕಥಾ ಪ್ರಸಂಗ - ಲಂಕೇಶ್
ಲಂಕೇಶ್ ಅವರ ಭಾಷೆಯ ಬಳಕೆ (ಹಳ್ಳಿ ಭಾಷೆ) ಇದರಲ್ಲಿ ಅತ್ತ್ಯುತ್ತಮವಾಗಿದೆ. ಓದುತ್ತ ಹೋದಷ್ಟು ಇನ್ನಷ್ಟು ಕುತೂಹಲ ಕೆರಳಿಸುತ್ತೆ, ಓದುವುದು ನಿಲ್ಲಿಸೋಕೆ ಮನಸೇ ಬರುವುದಿಲ್ಲ. ಹೇಗೆ ಹಳ್ಳಿಗಳಲ್ಲೂ ಕೂಡ ಪ್ರೀತಿ ಪ್ರೇಮ ನಡೆಯತ್ತೆ ಹಾಗು ಅದಕ್ಕೆ ಹೇಗೆ ಜಾತಿ, ಧರ್ಮ ಅಡ್ಡಿ ಬರುತ್ತೆ ಹಾಗು ಪ್ರೀತಿ ಪ್ರೇಮ ಅದೆಲ್ಲವನ್ನು ಮೀರಿ ಹೇಗೆ ಗೆಲ್ಲುತ್ತೆ ಅಂತ ತುಂಬಾ ಚೆನ್ನಾಗಿ ತಿಳಿಸಿದ್ದಾರೆ. ಕಥೆ ನಮ್ಮನು ತಂತಾನೇ ಕಲ್ಪನಾ ಲೋಕಕ್ಕೆ ಕರೆದು ಕೊಂಡು ಹೋಗುವುದಂತೂ ಖಂಡಿತ.
ನಿಜವಾಗಲು ತುಂಬಾ ಖುಷಿ ಕೊಡುತ್ತೆ; ಓದಲು ಮರೆಯಬೇಡಿ.
೨. ವಿಷಪ್ರಾಷಣ - ತ.ರಾ.ಸು
ತ.ರಾ.ಸು ಅವರ ಭಾಷಾ ಬಳಕೆ ತುಂಬಾ ಸರಳವಾಗಿದೆ. ಈ ಕಾದಂಬರಿಯ ಶುರು ತುಂಬಾ ಚೆನ್ನಾಗಿದೆ ನಾಯಕನ ಪರಿಚಯವಂತು ಮರೆಯೋ ಹಾಗಿಲ್ಲ. ಆದರೆ ನಂತರ ಸ್ವಲ್ಪ ಬೇಜಾರಾಗುವ ಕಥೆ ಯಾಕೆಂದರೆ ನಾಯಕ ೨ ಹೆಣ್ಣು ಗಳಿಂದ ಪ್ರೀತಿಯಲ್ಲಿ ಮೋಸ ಹೋಗುತ್ತಾನೆ; ಲೇಖಕರು ಹೇಗೆ ಕೆಲವು ವ್ಯಕ್ತಿಗಳಿಂದ ಕೆಲವರ ಜೀವನದಲ್ಲಿ ಹೇಗೆಲ್ಲ ತೊಂದರೆ/ಮಾನಸಿಕ ಹಿಂಸೆ ಅನುಭವಿಸುತ್ತಾರೆ ಅನ್ನುವುದನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ; ಹಾಗೇನೆ ಹೇಗೆ ಇಂತ ಸಂದರ್ಭಗಳನ್ನು ಎದುರಿಸಿ ಬಾಳಬೇಕು ಎಂಬುದನ್ನು ತಿಳಿಸಿದ್ದಾರೆ ಆದರೆ ಕಥೆಯ ಮುಕ್ತಾಯ ಸ್ವಲ್ಪ ಅವಸರದಲ್ಲಿ ಮುಗಿಸಿರೋ ಹಾಗೆ ಕಾಣಿಸುತ್ತೆ.
ಆದ್ರೆ ಓದಲೇಬೇಕಾದ ಪುಸ್ತಕವಿದು.
೩. ಮಲೆನಾಡಿನ ಚಿತ್ರಗಳು - ಕು. ವೆಂ. ಪು
ಕು.ವೆಂ.ಪು ಅವರ ಬಗ್ಗೆ ಎಷ್ಟು ಹೇಳಿದ್ರು ಕಡಿಮೇನೆ; ಅವರು ಮಲೆನಾಡಿನ ಬಗ್ಗೆ ಹೇಳಬೇಕಾದರೆ ಓದುವ ವ್ಯಕ್ತಿ ಯಾವ ಪ್ರದೇಶದವನಾದರು ಅವರನ್ನು ಮಲೆನಾಡಿನ ಪ್ರಕೃತಿ ಮಡಿಲಿಗೆ ಕರೆದು ಕೂರಿಸಿಕೊಂಡು ಕಥೆ ಹೇಳುವ ಹಾಗೆ ಅನುಭವ ಹಾಗುವುದಂತು ಖಂಡಿತ. ತುಂಬಾ ತಮಾಷೆಯಾಗಿ ಹಾಗು ಕಣ್ಣಿಗೆ ಕಟ್ಟುವಂತೆ ಅವರ ಬಾಲ್ಯದ ಕೆಲವು ಘಟನೆಗಳನ್ನು ಈ ಪುಸ್ತಕದಲ್ಲಿ ನಮ್ಮ ಜೊತೆ ಹಂಚಿಕೊಂಡಿದ್ದಾರೆ ಆದರೆ ಭಾಷೆ ಬಳಕೆ ಸರಳವಾಗಿಲ್ಲ ಓದುಗರು ಕನ್ನಡ ತುಂಬಾ ಚೆನ್ನಾಗಿ ಬಲ್ಲವರಾದರೆ ಮಾತ್ರ ಸುಲಭವಾಗಿ ವೇಗವಾಗಿ ಓದಿ ಮುಗಿಸಬಹುದು.
Nanna mundina pustaka
ReplyDelete"Masanada Hoova" - Ta.Ra.Su